ಕಲಬುರಗಿ: ನಂದೂರು ಕೈಗಾರಿಕೆ ಪ್ರದೇಶದಲ್ಲಿ ಬೈಕ್ಗೆ ಕಾರು ಡಿಕ್ಕಿ: ಸವಾರ ಸ್ಥಳದಲ್ಲೆ ದುರ್ಮರಣ
ಕಲಬುರಗಿ : ಬೈಕ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಕಲಬುರಗಿ ನಗರ ಹೊರವಲಯದ ನಂದೂರು ಕೈಗಾರಿಕಾ ಪ್ರದೇಶದಲ್ಲಿ ನಡೆದಿದ್ದು, ನವೆಂಬರ್ 10 ರಂದು ಸಂಜೆ 6 ಗಂಟೆಗೆ ಮಾಹಿತಿ ಲಭ್ಯವಾಗಿದೆ.. KA 41 N 3168 ಸಂಖ್ಯೆಯ ಸ್ವಿಫ್ಟ್ ಕಾರು ಎದುರಿಗೆ ಬಂದ KA 32 HL 1963 ಸಂಖ್ಯೆಯ ಬೈಕ್ಗೆ ಡಿಕ್ಕಿ ಹೊಡೆದಿದ್ದು, ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ.. ಇನ್ನೂ ಚಾಲಕ ಪರಾರಿಯಾಗಿದ್ದು, ಸಂಚಾರಿ ಠಾಣೆ-1 ರಲ್ಲಿ ಪ್ರಕರಣ ದಾಖಲಾಗಿದೆ