ಕಲಬುರಗಿ: ನಗರದಲ್ಲಿ ಲೋಕಾಯುಕ್ತ ದಾಳಿ ವೇಳೆ ಖಾಸಗಿ ಕಚೇರಿಯಲ್ಲಿ ಮಹಾನಗರ ಪಾಲಿಕೆ ಕಡತ, ₹8 ಲಕ್ಷ ಹಣ ಪತ್ತೆ: ಬೆಚ್ಚಿಬಿದ್ದ ಲೋಕಾ ಟೀಮ್
ಕಲಬುರಗಿ : ಕಲಬುರಗಿ ಮಹಾನಗರ ಪಾಲಿಕೆ ಮೇಲೆ ಲೋಕಾಯುಕ್ತ ದಾಳಿ ವೇಳೆ ಪಾಲಿಕೆಯಲ್ಲಿನ ಇಂಚಿಂಚು ಹಗರಣಗಳು, ಭ್ರಷ್ಟಾಚಾರ ಬಯಲಿಗೆ ಬರ್ತಿದೆ.. ಹೌದು.. ದಾಳಿ ಸಂದರ್ಭದಲ್ಲಿ ಮೂರು ಖಾಸಗಿ ಕಚೇರಿಗಳಲ್ಲಿ ಮಹಾನಗರ ಪಾಲಿಕೆಯ ರೆಜಿಸ್ಟರ್ ಹಾಗೂ ₹8 ಲಕ್ಷ ರೂ ನಗದು ಹಣ ಪತ್ತೆಯಾಗಿದೆ. ಈ ಬಗ್ಗೆ ಸೆ15 ರಂದು ರಾತ್ರಿ 8 ಗಂಟೆಗೆ ಲೋಕಾಯುಕ್ತರು ಮಾಹಿತಿ ನೀಡಿದ್ದಾರೆ..