ಶಿರಹಟ್ಟಿ: ತಾಲೂಕಿನ ಜಲ್ಲಿಗೇರಿ ಗ್ರಾಮದ ಸಮಾಜಸೇವಕ ಮಾರ್ಥಂಡಪ್ಪ ಹರಿಜನ ಗೌರವ ಡಾಕ್ಟರೇಟ್ ಪದವಿ ಪ್ರಧಾನಪ್ರಧಾನವಾದ
ಗದಗ್ ಜಿಲ್ಲೆ ಶಿರಹಟ್ಟಿ ತಾಲೂಕಿನ ಜಲ್ಲಿಗೇರಿ ಗ್ರಾಮದ ಸಮಾಜಸೇವಕ ಮಾರ್ಥಂಡಪ್ಪ ಹರಿಜನ ಅವರಿಗೆ ಚೆನ್ನೈನ ಗ್ಲೋಬಲ್ ಹ್ಯೂಮನ್ ಫೀಸ್ ಯೂನಿವರ್ಸಿಟಿ ಅವರು ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಿ ಗೌರವಿಸಿದೆ. ಮಂಗಳವಾರ ಪಾಂಡಿಚೆರಿಯ ಕಂಬನ ಕಲಯ್ ರಂಗಂ ಆಡಿಟೋರಿಯಂನಲ್ಲಿ ನಡೆದ ಡಾಕ್ಟರೇಟ್ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ತಾಲೂಕಿನ ಮಾರ್ತಾಂಡಪ್ಪ ಹರಿಜನ ಅವರಿಗೆ ಸಮಾಜ ಸೇವೆಯಲ್ಲಿ ಅತ್ಯುತ್ತಮ ಪಾತ್ರ ವಹಿಸಿದ್ದಕ್ಕೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.