ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಾಗಿ ಬಡಿದಾಟದ ವಿಚಾರ.ಇಳಕಲ್ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ. ಅದು ಅವ್ರ ಪಕ್ಷದ ಆಂತರಿಕ ವಿಚಾರ.ಅವ್ರ ಪಕ್ಷಕ್ಕೆ, ಶಾಸಕರಿಗೆ ಬಿಟ್ಟಿದ್ದು.ಇಂದು ನಡೆದಿರುವ ಶಾಸಕರ ಖರೀದಿ ಪ್ರಕ್ರಿಯೆ ಹಿಂದೆಯೂ ಆಗಿವೆ, ಅದೇ ಪುನರಾವರ್ತನೆ ಆಗ್ತಿದೆ, ಇದು ಒಳ್ಳೆಯದಲ್ಲ. ರಾಜ್ಯದಲ್ಲಿ ಅನೇಕ ಭೀಕರವಾದ ಸಮಸ್ಯೆಗಳಿವೆ.ಕಾನೂನು ಸುವ್ಯವಸ್ಥೆ ಇಲ್ಲ, ಬೆಂಗಳೂರಿನಲ್ಲಿ ಹಗಲು ದರೋಡೆ ಆಗ್ತಿವೆ. ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿರುವ ಸಮಯದಲ್ಲಿ. ಯಾವ ಜಾತಿಯವ್ರು ಸಿಎಂ ಆಗಬೇಕೆಂಬುದು ಮುಖ್ಯ ಅಲ್ಲ. ಅವ್ರಾಗಬೇಕು, ಇವ್ರಾಗಬೇಕು ಅನ್ನೋದು ಒಳ್ಳೆಯ ಬೆಳವಣಿಗೆ ಅಲ್ಲ ಎಂದಿದ್ದಾರೆ.