ಹುಲಸೂರ: ಬೇಲೂರನಲ್ಲಿ ಜೈ ಭವಾನಿ ಜಾತ್ರೆ ನಿಮಿತ್ತ ಗಮನ ಸೆಳೆದ ಆನೆ ಮೇಲೆ ಅಂಬಾರಿ ಮೆರವಣಿಗೆ
Hulsoor, Bidar | Oct 7, 2025 ಬೀದರ ಜಿಲ್ಲೆಯ ಹುಲಸೂರ ತಾಲ್ಲೂಕಿನ ಬೇಲೂರ ಗ್ರಾಮದಲ್ಲಿ ಜೈ ಭವಾನಿ ದೇವಿಯ ಅಂಬಾರಿಯನ್ನು ಹೊತ್ತ ಆನೆಯು ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಹೊರಟ ಮೆರವಣಿಗೆ ಗ್ರಾಮದ ಬೀದಿ - ಬೀದಿಗಳಲ್ಲಿ ಸಂಚರಿಸಿ 78 ನೇ ವರ್ಷದ ಪಲ್ಲಕ್ಕಿ ಉತ್ಸವ ಮಂಗಳವಾರ ತೆರೆಕಂಡಿತು. ಕಾರ್ಯಕ್ರಮಕ್ಕೆ ಶಾಸಕ ಶರಣು ಸಲಗರ ಚಾಲನೆ ನೀಡಿ ಮಾತನಾಡಿ ಜೈ ಭವಾನಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಅಂಬಾರಿ ಉತ್ಸವದ ಅಂಗವಾಗಿ ದೇವಿಗೆ ವಿಶೇಷ ಹೂವು ಮತ್ತು ಚಿನ್ನಾಭರಣಗಳಿಂದ ಅಲಂಕಾರ ಮಾಡಿ ಉತ್ಸವ ಮೂರ್ತಿಯನ್ನು ಆನೆಯ ಮೇಲೆ ಸಿದ್ದಗೊಳಿಸಿದ್ದ ಅಂಬಾರಿಗೆ ಕೊಂಡೊಯ್ಯಲಾಯಿತು. ಆನೆಯ ಮೇಲೆ ಅಂಬಾರಿಯನ್ನು ಇಟ್ಟು ಸಾಗುವ ಮೆರವಣಿಗೆಯನ್ನು ನೋಡಲು ಭಕ್ತಾದಿಗಳು ದೂರದ ಊರುಗಳಿಂದ ಆಗಮಿಸಿ ಸಂಬಂಧಿಕರ ಮನೆಯಲ್ಲಿ ಹಾಗೂ ದೇ