ಮಳವಳ್ಳಿ: ಶಿವನಸಮುದ್ರದಲ್ಲಿ ಆನೆಯನ್ನು ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು
ನೀರು ಕುಡಿಯಲು ಬಂದ ಕಾಡಾನೆಯೊಂದು ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದ ಬಳಿ ಇರುವ ಖಾಸಗಿ ವಿದ್ಯುತ್ ಉತ್ಪಾದನಾ ನಾಲೆಗೆ ಕಳೆದ ಶನಿವಾರ ರಾತ್ರಿ ಬಿದ್ದಿತ್ತು. ಮಂಗಳವಾರ ಮಧ್ಯಾಹ್ನದ ವೇಳೆಗೆ ಅರಣ್ಯ ಸಿಬ್ಬಂದಿ ಕ್ರೈನ್ ಮೂಲಕ ಆನೆಯನ್ನು ಮೇಲೆತ್ತಲು ಯಶಸ್ವಿಯಾಗಿದ್ದಾರೆ. ಕಳೆದ ಶನಿವಾರ ರಾತ್ರಿ ನೀರನ್ನು ಕುಡಿಯಲೆಂದು ಕಾಡಾನೆಯೊಂದು ಶಿವನಸಮುದ್ರದ ಜಲಪಾತದ ಬಳಿಗೆ ಬಂದಿದೆ. ಆ ವೇಳೆ ಕತ್ತಲಾಗಿದ್ದರಿಂದ ಆನೆ ಆಯತಪ್ಪಿ ಖಾಸಗಿ ವಿದ್ಯುತ್ ಉತ್ಪಾದನಾ ನಾಲೆಗೆ ಬಿದ್ದಿದೆ. ಇದನ್ನು ಕಂಡ ವಿದ್ಯುತ್ ಉತ್ಪಾದನಾ ಕೇಂದ್ರದ ಸಿಬ್ಬಂದಿ ಅರಣ್ಯ ಇಲಾಖೆಗೆ ಆನೆ ಬಿದ್ದಿರುವ ವಿಚಾರ ಮುಟ್ಟಿಸಿ ಸುಮ್ಮನಾಗಿದ್ದಾರೆ. ಜೊತೆಗೆ ವಿಚಾರ ಮುಟ್ಟಿಸಿದರೂ ಸಹ ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆ ಮೇಲೆತ್ತುವ ಕೆಲಸವನ್ನು ಮಾಡದೇ ಭಾನುವಾರ ಕಾಲಹರ