ಕೊಲ್ಹಾರ: ಮಸೂತಿ ಗ್ರಾಮದಲ್ಲಿ ಮಾರ್ಗಮ್ಮ ದೇವಿ ದೇವಸ್ಥಾನದ ಸಮುದಾಯ ಭವನ ಉದ್ಘಾಟಿಸಿದ ಸಚಿವ ಶಿವಾನಂದ ಪಾಟೀಲ್
ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮದಲ್ಲಿ ಮರಗಮ್ಮ ದೇವಿ ದೇವಸ್ಥಾನದ ಸಮುದಾಯ ಭವನವನ್ನು ಗುರುವಾರ ರಾತ್ರಿ 8ಗಂಟೆ ಸುಮಾರಿಗೆ ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವನಂದ ಪಾಟೀಲ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಕಳೆದ ವರ್ಷ ಸಮುದಾಯ ಭವನದ ಭೂಮಿ ಪೂಜೆ ನಾನೇ ಮಾಡಿದೆ ಇಂದು ಅದರ ಉದ್ಘಾಟನೆ ನಾನೇ ಮಾಡುತ್ತಿರುವುದು ಸಂತಸವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರುಗಳು ಪಕ್ಷದ ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.