ಔರಾದ್: ಕೌಠಾ(ಬಿ) ಸೇತುವೆಯಿಂದ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ; ಎರಡು ದಿನ ಕಳೆದರು ಪತ್ತೆಯಾಗದ ಶವ, ಮುಂದುವರೆದ ಶೋಧ ಕಾರ್ಯ
Aurad, Bidar | Nov 22, 2025 ಔರಾದ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕೌಠಾ (ಬಿ) ಗ್ರಾಮದ ಬಳಿ ಜರುಗಿದೆ. ಬೀದರ್ ನಗರದ ನಿವಾಸಿ ಕೃಷ್ಣ ಸೂರ್ಯಕಾಂತ (30) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಈತ ನದಿಗೆ ಹಾರಿದ್ದು, ಇದುವರೆ ಈತನ ಶವ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಸುದ್ದಿ ತಿಳಿದ ಸಂತಪೂರ ಠಾಣೆ ಪಿಎಸ್ಐ ನಂದಕುಮಾರ ಮುಳೆ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಹಾಯದೊಂದಿಗೆ ಶವಕ್ಕಾಗಿ ಹುಡುಕಾಟ ಮುಂದುವರೆಸಿದ್ದಾರೆ