ಸವದತ್ತಿ: ಚುನಾವಣೆ ಸಂದರ್ಭದಲ್ಲಿ ಮಾತ್ರ ಎಂಎಲ್ ಎ,ಎಂಪಿಗಳು ಬರುತ್ತಾರೆ ಚಿಕ್ಕ ಉಳ್ಳಿಗೇರಿ ಗ್ರಾಮದಲ್ಲಿ ರೈತ ಆಕ್ರೋಶ
ಬೆಳಗಾವಿಯಲ್ಲಿ ಸತತ ಮಳೆಯಿಂದ ಕಂಗೆಟ್ಟ ರೈತಾಪಿ ವರ್ಗ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ ರೈತ ಉಮೇಶ್ ಪೂಜಾರ್ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕ ಉಳ್ಳಿಗೇರಿ ಗ್ರಾಮದ ಹಳ್ಳದ ಪಕ್ಕದಲ್ಲಿರುವ 8 ಎಕರೆ ಜಮೀನು ಸಂಪೂರ್ಣ ಜಲಾವೃತವಾಗಿದ್ದು ಜಮೀನಿನಲ್ಲಿ ಉದ್ದು ಬೆಳೆದಿದ್ದ ರೈತ ಉಮೇಶ್ ಪೂಜಾರ್ ಕಂಗಾಲಾಗಿದ್ದು ಉದ್ದು ಬೆಳೆ ಎಲ್ಲವೂ ನೀರಿನಲ್ಲಿ ಕೊಚ್ಚಿಕೊಂಡು ಹೋದ ಹಿನ್ನಲೆ ಇಂದು ಶನಿವಾರ 12 ಗಂಟೆಗೆ ರೈತನ ಆಕ್ರೋಶ ವ್ಯಕ್ತಪಡಿಸಿದ್ದಾನೆ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಎಂ.ಎಲ್ ಎ,ಎಂಪಿ ಬರುತ್ತಾರೆ ಇವಾಗ ನಮ್ಮ ಸಮಸ್ಯೆ ಕೇಳಲು ಯಾರು ಬರೋದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾನೆ