ಚಿಕ್ಕಬಳ್ಳಾಪುರ: ಗುರುಕುಲ್ ನಾಗೇನಹಳ್ಳಿಯಲ್ಲಿ ರೈತರ ಮೇಲೆ ಕರಡಿಯ ಡೆಡ್ಲಿ ದಾಳಿ – ಇಬ್ಬರ ಸ್ಥಿತಿ ಗಂಭೀರ
ಚಿಕ್ಕಬಳ್ಳಾಪುರ ತಾಲೂಕಿನ ಗುರುಕುಲ್ ನಾಗೇನಹಳ್ಳಿಯಲ್ಲಿ ಗ್ರಾಮದ ರೈತರ ಮೇಲೆ ಕರಡಿ ದಾಳಿ ನಡೆಸಿದ್ದು, ಇಬ್ಬರು ರೈತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ಮೊದಲ ಬಾರಿಗೆ ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡಿರುವುದರಿಂದ ಗ್ರಾಮಸ್ಥರಲ್ಲಿ ಭೀತಿ ಹೆಚ್ಚಾಗಿದೆ.ಟೊಮ್ಯಾಟೊ ತೋಟಕ್ಕೆ ಹಾಗೂ ಬಾಳೆ ತೋಟಕ್ಕೆ ನೀರು ಬಿಡಲು ತೆರಳಿದ್ದ ರೈತರು ಕೃಷ್ಣಪ್ಪ (58) ಮತ್ತು ನರಸಿಂಹಯ್ಯ (41) ಮೇಲೆ ಕರಡಿ ಅಟ್ಟಹಾಸ ಮೆರೆದಿದೆ. ಏಕಾಏಕಿ ದಾಲಿ ನಡೆಸಿದ ಕರಡಿಯಿಂದ ರೈತರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಪ್ರಾಣಾಪಾಯದಿಂದ ಪಾರಾಗಲು ಸಾಧ್ಯವಾಗಲಿಲ್ಲ. ದಾಳಿಯಿಂದ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಸ್ಥಳೀಯರು ಅವರನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.