ಬೆಳಗಾವಿ ಅಧಿವೇಶನದ ವೇಳೆ ಶಾಸಕರಿಗೆ ಸರ್ಕಾರ ಭತ್ಯೆ ನೀಡಿದ ಮೇಲೂ ಅವರಿಗೆ ಊಟದ ವ್ಯವಸ್ಥೆ ಏಕೆ ಮಾಡಲಾಗುತ್ತಿದೆ? ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗಲಿದೆ ಎಂದು ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಅವರು ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರವಾಗಿ ಸೋಮವಾರ ಸಂಜೆ 5 ಗಂಟೆಗೆ ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ಆದೇಶ ಮಾಡಿದೆ. ಸರ್ಕಾರ ಅಧಿವೇಶನದ ವೇಳೆ ಶಾಸಕರಿಗೆ ಭತ್ಯೆ ಕೊಡು