ದಾಂಡೇಲಿ: ಜೆ.ಎನ್.ರಸ್ತೆಯ ಧೂಳಿನ ಸಮಸ್ಯೆಗೆ ಮುಕ್ತಿ ನೀಡಲು ಮುಂದಡಿಯಿಟ್ಟ ನಗರ ಸಭೆ
ದಾಂಡೇಲಿ : ನಗರದ ಪ್ರಮುಖ ರಸ್ತೆಯಾಗಿರುವ ಜೆ.ಎನ್.ರಸ್ತೆ ತೀವ್ರ ಹದಗೆಟ್ಟು ಹೊಂಡ ಗುಂಡಿಗಳು ನಿರ್ಮಾಣವಾಗಿ ರಸ್ತೆಯಿಡಿ ಧೂಳಿನಿಂದ ಆವೃತಗೊಂಡು, ವಾಹನಗಳು ಸಂಚರಿಸಿದ ಸಂದರ್ಭದಲ್ಲಿ ಧೂಳು ಹರಡಿಕೊಳ್ಳುತ್ತಿರುವುದರಿಂದ ಸ್ಥಳೀಯ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳುವವರೆಗೆ ಧೂಳಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಗರಸಭೆ ಅಗತ್ಯ ಕ್ರಮವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದೆ. ಮಂಗಳವಾರ ತಡರಾತ್ರಿಯಿಂದ ಆರಂಭಗೊಂಡು ಬುಧವಾರ ಬೆಳಗ್ಗೆ 6 ಗಂಟೆಯವರೆಗೆ ಜೆ.ಎನ್.ರಸ್ತೆಯಲ್ಲಿದ್ದ ಧೂಳನ್ನು ಅತ್ಯಾಧುನಿಕ ಯಂತ್ರದ ಮೂಲಕ ವಿಲೇವಾರಿ ಮಾಡಲು ನಗರಸಭೆ ಮುಂದಾಗಿದೆ.