ಗದಗ: ಕೋವಿಡ್ ಉಲ್ಭಣಿಸಿದಲ್ಲಿ ಪರಿಸ್ಥಿತಿ ಎದುರಿಸಲು ಸನ್ನದ್ಧತೆಗೆ ಸೂಚನೆ: ನಗರದಲ್ಲಿ ಸಚಿವ ಪಾಟೀಲ
Gadag, Gadag | May 27, 2025 ಜಿಲ್ಲೆಯಲ್ಲಿ ಕೋವಿಡ್ ಬಗ್ಗೆ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಆದರೂ ಸಹ ಕೋವಿಡ್ ಕುರಿತು ಮುಂಜಾಗೃತೆ ವಹಿಸಬೇಕು. ಜನರಲ್ಲಿ ಭಯ ಬೇಡ, ಜಾಗೃತಿ ಇರಲಿ ಎಂದು ಸಚಿವ ಡಾ.ಎಚ್. ಕೆ. ಪಾಟೀಲ ಅವರು ಸೂಚನೆ ನೀಡಿದರು. ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಕೋವಿಡ್ ಮುಂಜಾಗೃತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.