ಕೊಳ್ಳೇಗಾಲ: ಕೊಳ್ಳೇಗಾಲದಲ್ಲಿ ಸಾಹಸಸಿಂಹ ಡಾ. ವಿಷ್ಣುವರ್ಧನ್ ಹುಟ್ಟುಹಬ್ಬ ಅದ್ದೂರಿ ಆಚರಣೆ; ಮಿಮಿಕ್ರಿ ಗೋಪಿ ಭಾಗಿ
ಕೊಳ್ಳೇಗಾಲ: ಕನ್ನಡ ಚಿತ್ರರಂಗದ ಅನನ್ಯ ನಟ, ಸಾಹಸಸಿಂಹ ಡಾ. ವಿಷ್ಣುವರ್ಧನ್ ರವರ ಹುಟ್ಟುಹಬ್ಬವನ್ನು ಕೊಳ್ಳೇಗಾಲ ಪಟ್ಟಣದಲ್ಲಿ ಅವರ ನಿಷ್ಠಾವಂತ ಅಭಿಮಾನಿಗಳು ಹಾಗೂ ಖ್ಯಾತ ಮಿಮಿಕ್ರಿ ಕಲಾವಿದ ಮಿಮಿಕ್ರಿ ಗೋಪಿ ಅವರ ಸಮ್ಮುಖದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಪಟ್ಟಣದ ಬಸ್ ನಿಲ್ದಾಣ ರಸ್ತೆಯಲ್ಲಿರುವ ವಿಷ್ಣು ಫ್ರೂಟ್ಸ್ ಸ್ಟಾಲ್ ಬಳಿ ವಿಶೇಷ ಪೂಜೆ ನೆರವೇರಿಸಿ, ಪುಷ್ಪನಮನ ಅರ್ಪಿಸಲಾಯಿತು. ಬಳಿಕ ಕೇಕ್ ಕತ್ತರಿಸಿ, ವಿಶೇಷ ದಿನವನ್ನು ಸಂಭ್ರಮದೊಂದಿಗೆ ಆಚರಿಸಲಾಯಿತು. ಈ ಸಂದರ್ಭ ಮಾತನಾಡಿದ ಮಿಮಿಕ್ರಿ ಗೋಪಿ ಡಾ. ವಿಷ್ಣುವರ್ಧನ್ ಅವರ ನಟನೆ ಮಾತ್ರವಲ್ಲ,ವ್ಯಕ್ತಿತ್ವ ಎಲ್ಲರಿಗೂ ಪ್ರೇರಣೆ ಎಂದರು