ಲಿಂಗಸೂರು: ಮೇದಿನಾಪುರ ಗ್ರಾಮದ ಬಳಿಯ ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ಎಮ್ಮೆಗಳು
ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿದ ಮಹಾಮಳೆ ಯಿಂದಾಗಿ ರಾಯಚೂರು ಜಿಲ್ಲೆಯ ಲಿಂಗಸುಗೂರ ತಾಲೂಕಿನ ಹಳ್ಳಕೊಳ್ಳಲು ತುಂಬಿ ಹರಿಯಲಾರಂಭಿಸಿದ್ದು ಅದರಂತೆ ಮೇದಿನಾಪುರ ಗ್ರಾಮದ ಬಳಿಯ ಹಳ್ಳದಲ್ಲಿ ಬಾರಿ ಪ್ರಮಾಣದಲ್ಲಿ ನೀರು ಬಂದಿದ್ದರಿಂದ ಹಳ್ಳ ದಾಖಲು ಹೋದಾಗ ಸೋಮವಾರ ಬೆಳಗ್ಗೆ 3 ಎಮ್ಮೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ. ಹಳ್ಳವನ್ನು ದಾಟಲು ಸಾರ್ವಜನಿಕರು ಕೂಡ ಭಯಪಡುವಂತಾಗಿದ್ದು ರಸ್ತೆ ಸಂಚಾರ ಬಂದ್ ಆಗಿದೆ. ಎಂದಿನಂತೆ ಎಮ್ಮೆಗಳು ನೀರು ದಾಟಿಕೊಂಡು ಮೇಯಲು ಎಂದು ಹೋಗುವಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ ಎಂದು ತಿಳಿದು ಬಂದಿದೆ.