ಸರಗೂರು: ಎಂ.ಸಿ.ತಳಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಸರ್ವೇಯರ್ ಹಾಗೂ ಕಂಪ್ಯೂಟರ್ ಆಪರೇಟರ್ ಲೋಕಾಯುಕ್ತ ಬಲೆಗೆ
ಎಂ.ಸಿ.ತೊಳಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸರ್ವೇಯರ್, ಕಂಪ್ಯೂಟರ್ ಆಪರೇಟರ್ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ಪಿಡಿಓ ಶಿಲ್ಪಾ ಸರ್ವೇಯರ್ ಬಾಲಾಜಿ, ಡಾಟಾ ಎಂಟ್ರಿ ಅಪರೇಟರ್ ಶಿವಲಿಂಗ ಪ್ರಸಾದ್ ಲೋಕ ಯುಕ್ತ ಬಲೆಗೆ ಬಿದ್ದ ನೌಕರರು. ಚನ್ನಗುಂಡಿ ಗ್ರಾಮದ ಲಿಂಗರಾಜು ಎಂಬುವವರ ನಿವೇಶನವನ್ನು ಇ-ಸ್ವತ್ತು ಮಾಡಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಇತರರು 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.