ಯಳಂದೂರು: ರಾಮಾಪುರ ಸಮೀಪದ ಅರಣ್ಯದಲ್ಲಿ
ಕಾಡುಕೋಣ ಬೇಟೆ ಪ್ರಕರಣ: ಒಬ್ಬನ ಬಂಧನ, ಇಬ್ಬರು ಪರಾರಿ
ಹನೂರು: ಅರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿ ನಾಡ ಬಂದೂಕಿನಿಂದ ಕಾಡುಕೋಣವನ್ನು ಹತ್ಯೆ ಮಾಡಿ ಮಾಂಸವನ್ನಾಗಿ ಪರಿವರ್ತಿಸಿ ಒಣಗಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕೊಳ್ಳೇಗಾಲ ತಾಲೂಕಿನ ಮೇಗಲದೊಡ್ಡಿ ಪ್ರಕಾಶ್ ಪಾಳ್ಯ ಗ್ರಾಮದ ಜೋಸೆಫ್ ಬಂಧಿತ ಆರೋಪಿಯಾಗಿದ್ದಾನೆ. ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ರಾಮಪುರ ಶಾಖೆಯ ಹುಲಿಯಮ್ಮ ಗಸ್ತಿನ ಸಿಪಿಟಿ ೧೦೯ರ ಕುರಿಮಂದೆ ಬಯಲು ಅರಣ್ಯ ಪ್ರದೇಶದಲ್ಲಿ ಗಸ್ತು ಮಾಡುತ್ತಿದ್ದಾಗ ಒಂದು ಕಾಡುಕೋಣವನ್ನು ನಾಡ ಬಂದೂಂಕಿನಿಂದ ಹತ್ಯೆ ಮಾಡಿ ಮಾಂಸವನ್ನು ತುಂಡುಗಳಾಗಿ ಪರಿವರ್ತಿಸಿ ಒಣಗಿಸುವುದು ಕಂಡುಬಂದ ಹಿನ್ನೆಲೆ ಅರುಣ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕ್ರಮ ಕೈಗೊಂಡಿದ್ದಾರೆ