ದಾಂಡೇಲಿ: ಎಎಸ್ಐ ಗಿರೀಶ ಸೂರ್ಯವಂಶಿಯವರಿಗೆ ನಗರದ ಮಾಸ್ಕೇರಿ ಸಾಹಿತ್ಯಾರಾಧನಾ ಸಂಸ್ಥೆಯಿಂದ ಗಟ್ಟಿ ಧ್ವನಿಯ ಉತ್ತಮ ಸಾಂಸ್ಕೃತಿಕ ನಿರೂಪಕ ಗೌರವ ಪ್ರದಾನ
ದಾಂಡೇಲಿ : ನಗರದ ಮಾಸ್ಕೇರಿ ಸಾಹಿತ್ಯಾರಾಧನಾ ಸಂಸ್ಥೆಯ ವತಿಯಿಂದ ಸಂಸ್ಥೆಯ ಸಭಾಭವನದಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಗಿರೀಶ ಸೂರ್ಯವಂಶಿಯವರಿಗೆ ಗಟ್ಟಿ ಧ್ವನಿಯ ಉತ್ತಮ ಸಾಂಸ್ಕೃತಿಕ ನಿರೂಪಕ ಎಂಬ ಗೌರವವನ್ನು ಬುಧವಾರ ಸಂಜೆ 5:30 ಗಂಟೆ ಸುಮಾರಿಗೆ ಪ್ರಧಾನ ಮಾಡಲಾಯಿತು. ನಾಡಿನ ಹಿರಿಯ ಸಾಹಿತಿ ಹಾಗೂ ನಗರದ ಮಾಸ್ಕೇರಿ ಸಾಹಿತ್ಯಾರಾಧನಾ ಸಂಸ್ಥೆಯ ಪ್ರವರ್ತಕರಾದ ಮಾಸ್ಕೇರಿ ಎಂ.ಕೆ.ನಾಯಕ ಅವರು ಈ ಗೌರವವನ್ನು ಪ್ರಧಾನ ಮಾಡಿದರು. ಸಂಗೀತ ಹಾಗೂ ಕಾರ್ಯಕ್ರಮ ನಿರ್ವಹಣೆಯ ಮೂಲಕ ಗಿರೀಶ್ ಸೂರ್ಯವಂಶಿಯವರು ಈಗಾಗಲೇ ಗಮನ ಸೆಳೆದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.