ಚಿಟಗುಪ್ಪ: ಕಬ್ಬು ಸಾಗಿಸುವ ಟ್ಯಾಕ್ಟರ್ ಹಿಂಬದಿ ಕಡ್ಡಾಯವಾಗಿ ರೇಡಿಯಂ ಅಳವಡಿಸಲು ಸೂಚಿಸಿ : ಮನ್ನಾಎಖೆಳ್ಳಿ ಬಳಿ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ
ಕಾರ್ಖಾನೆಗಳಿಗೆ ಕಬ್ಬು ಸಾಗಿಸುವ ಟ್ಯಾಕ್ಟರ್ ಗಳ ಹಿಂಬದಿಗೆ ಕಡ್ಡಾಯವಾಗಿ ರೇಡಿಯಮ್ ಅಳವಡಿಸಲು ಕಾರ್ಖಾನೆ ಮಾಲೀಕರು ಪ್ರತಿ ಟ್ಯಾಕ್ಟರ್ ಚಾಲಕರಿಗೆ ಸೂಚಿಸಬೇಕು ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮನವಿ ಮಾಡಿದರು. ಸೋಮವಾರ ಸಂಜೆ 6:45ಕ್ಕೆ ಟ್ರಾಕ್ಟರ್ ಒಂದು ರೇಡಿಯಮ್ ಇಲ್ಲದೆ ನಿಲ್ಲಿಸಲಾದ ಕಾರಣ ಹಿಂಬದಿಗೆ ಡಿಕ್ಕಿ ಹೊಡೆದ ಬೈಕ್ ಸವಾರ ಬೊಂಬಳಗಿ ಗ್ರಾಮದ ಸುನಿಲ್ ಗಂಭೀರ ಗಾಯಗೊಂಡಿದ್ದಾರೆ. ಇಂಥ ಘಟನೆ ಮರುಕಳಿಸದಂತೆ ಮುಂಜಾಗ್ರತೆ ವಹಿಸಲು ಕಾರ್ಖಾನೆ ಮಾಲೀಕರು ಕಡ್ಡಾಯವಾಗಿ ಟ್ರಾಕ್ಟರ್ ಗಳ ಹಿಂಬದಿಗೆ ರೆಡಿಯಂ ಅಳವಡಿಸಲು ಸೂಚಿಸಬೇಕು ಮತ್ತು ಪೊಲೀಸರು ಈ ಬಗ್ಗೆ ವಿಶೇಷ ನಿಗಾವಹಿಸಬೇಕು ಎಂದು ಸ್ಥಳಕ್ಕೆ ಭೇಟಿ ನೀಡಿ ಗಾಯಾಳು ವನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮನವಿ ಮಾಡಿದರು.