ಚಳ್ಳಕೆರೆ: ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕುಸಿತ:ಬೋಸದೇವರಹಟ್ಟಿಯಲ್ಲಿ ಖರೀದಿಯಾಗದೇ ಹೊಲದಲ್ಲಿಯೇ ಕೊಳೆಯುವ ಹಂತಕ್ಕೆ ತಲುಪಿದ ಈರುಳ್ಳಿ
ಚಳ್ಳಕೆರೆ:- ಈರುಳ್ಳಿ ಬೆಲೆ ಕುಸಿತದಿಂದಾಗಿ ರೈತರು ಕಂಗಾಲಾಗಿದ್ದಾರೆ. ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೊಸೆದೇವರಹಟ್ಟಿ ಗ್ರಾಮದ ಜಿ.ಬಿ ಮುದಿಯಪ್ಪ ತನ್ನ ಹೊಲದಲ್ಲಿ ಬೆಳೆದ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗದ ಕಾರಣ ಪ್ಯಾಕೆಟ್ ನಲ್ಲಿ ತುಂಬಿಟ್ಟ ಈರುಳ್ಳಿಯೂ ಕೊಳೆಯುವ ಹಂತಕ್ಕೆ ತಲುಪಿದೆ. ಸತತ 20 ದಿನಗಳ ಮಳೆ ಮತ್ತು ಶೀತ ವಾತಾವರಣದಿಂದ ಈರುಳ್ಳಿ ಗಡ್ಡೆ ನಿರೀಕ್ಷೆ ಗಾತ್ರಕ್ಕೆ ಬೆಳೆದಿಲ್ಲ. ಜತೆಗೆ ಶಿಲೀಂದ್ರ ರೋಗಗಳು ಹೆಚ್ಚಾಗಿದ್ದು ಪೈರಿನ ಇಳುವರಿ ಕುಸಿದಿದೆ. ಹೀಗಾಗಿ ಗುಣಮಟ್ಟದ ಬೆಳೆ ರೈತರಿಗೆ ದೊರೆತಿಲ್ಲ.