ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಬ್ರೇಕ್ಫಾಸ್ಟ್ ಮೀಟಿಂಗ್ ಬೆನ್ನಲ್ಲೇ ಬಿಜೆಪಿ ರಾಯಭಾಗ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಇಂದು ಶನಿವಾರ 2 ಗಂಟೆಗೆ ಸ್ಪೋಟಕ ಹೇಳಿಕೆ ನೀಡಿದ್ದು ಸಿಎಂ ಸಿದ್ದರಾಮಯ್ಯ ಬದಲಾದರೆ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ನಮ್ಮ ಜಿಲ್ಲೆಯ ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು ಸತೀಶ್ ಜಾರಕಿಹೊಳಿ ಸಿಎಂ ಆದರೆ ನಮ್ಮ ಜಿಲ್ಲೆಯವರು ಎಂದು ಬಹಳ ಖುಷಿ ಪಡ್ತಿವಿ ಸತೀಶ್ ಆಗದಿದ್ದರೂ ಖರ್ಗೆ, ಪರಮೇಶ್ವರ, ಮುನಿಯಪ್ಪ ಸಿಎಂ ಆಗಬೇಕು ಸಿಎಂ ಕುರ್ಚಿ ಕಿತ್ತಾಟದ ಕಾರಣಕ್ಕೆ ನಮಗೆ ಸಿಎಂ ಭೇಟಿ ಆಗ್ತಿಲ್ಲ, ಡಿಸಿಎಂ ಭೇಟಿ ಆಗ್ತಿಲ್ಲ ಎಂದು ಐಹೊಳೆ ಬೇಸರ ವ್ಯಕ್ತಪಡಿಸಿದರು.