ಮಂಗಳೂರು: ನಗರದಲ್ಲಿ ನೀರಿನ ಗುಣಮಟ್ಟದ ಪರೀಕ್ಷಾ ವರದಿ ಸಲ್ಲಿಸಲು ಮನಪಾ ಆಯುಕ್ತರ ಸೂಚನೆ
ಸಾರ್ವಜನಿಕರು ನೀರಿಗಾಗಿ ಟ್ಯಾಂಕರ್‌ಗಳನ್ನು ಅವಲಂಬಿಸುತ್ತಿದ್ದು, ಕಲುಷಿತ ನೀರು-ಆಹಾರ ಸೇವನೆಯಿಂದ ಕಾಲರಾ ಮತ್ತಿತರ ಸಾಂಕ್ರಾಮಿಕ ರೋಗಗಳ ಪ್ರಕರಣವು ಬೆಳಕಿಗೆ ಬರುತ್ತಿವೆ. ನಗರದ ಹೊಟೇಲ್, ರೆಸ್ಟೋರೆಂಟ್, ವಸತಿ ಗೃಹಗಳು, ವಸತಿ ಸಮುಚ್ಚಯಗಳು ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ಬಳಕೆ ಮಾಡುತ್ತಿವೆ. ಈ ನೀರಿನ ಗುಣಮಟ್ಟದ ಮೇಲೆ ಮಹಾನಗರ ಪಾಲಿಕೆಯು ನಿಗಾವಹಿಸಿವೆ. ಹಾಗಾಗಿ ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡುವ ಕಂಪೆನಿಗಳು ಎನ್‌ಎಬಿಎಲ್ ಮಾನ್ಯತೆ ಹೊಂದಿರುವ ಅಥವಾ ಸರಕಾರಿ ಸ್ವಾಮ್ಯದ ಪ್ರಯೋಗಾಲಯದಿಂದ ನೀರಿನ ಗುಣಮಟ್ಟದ ಪರೀಕ್ಷಾ ವರದಿಯನ್ನು ಎ.13ರೊಳಗೆ ಮನಪಾ ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಅಭಿಯಂತರ (ಮೊ.ಸಂ: 9448502777)ಅವರಿಗೆ ಸಲ್ಲಿಸುವಂತೆ ಮನಪಾ ಆಯುಕ್ತರು ಸೂಚನೆ ನೀಡಿದ್ದಾರೆ.