ಶೋರಾಪುರ: ನಗರದಲ್ಲಿ ಕನ್ನಡ ಸಾಹಿತ್ಯ ಸಂಘ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 39ನೇ ನಾಡಹಬ್ಬ ಮೆರವಣಿಗೆಗೆ ಚಾಲನೆ
ಯಾದಗಿರಿ ಜಿಲ್ಲೆಯ ಸುರಪುರ ನಗರದ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕನ್ನಡ ಸಾಹಿತ್ಯ ಸಂಘ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ 39ನೇ ನಾಡಬ್ಬ ಉತ್ಸವ ದಿನಾಚರಣೆಗೆ ಸುರಪುರ ಸಂಸ್ಥಾನದ ಯುವರಾಜ ರಾಜ ಲಕ್ಷ್ಮಿ ನಾರಾಯಣ ನಾಯಕ್, ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜ ಹನುಮಪ್ಪ ನಾಯಕ ತಾತ, ರಾಜ ಸಂತೋಷ್ ನಾಯಕ್, ರಾಜ ಕುಮಾರ ನಾಯಕ್ ಮುಕುಂದ ನಾಯಕ್ ಚಾಲನೆ ನೀಡಿದರು. ನಂತರ ಸುರಪುರ ನಗರದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಾಡ ದೇವಿಯ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಮುಖ್ಯ ರಸ್ತೆ ಮೇಲೆ ವಿವಿಧ ಕಲಾತಂಡಗಳಿಂದ ಅದ್ದೂರಿಯಾಗಿ ಮೆರವಣಿಗೆ ನಡೆಯಿತು. ಶಾಲಾ ಮಕ್ಕಳು ಡೊಳ್ಳು ಕುಣಿತ ಕುದುರೆ ಕುಣಿತ ನೋಡುಗರ ಕಣ್ಮನ ಸೆಳೆಯಿತು