ಜೇವರ್ಗಿ: ಶಾಖಾಪುರ ಗ್ರಾಮದಲ್ಲಿ ವಿಶಿಷ್ಟ ರೊಟ್ಟಿ ಜಾತ್ರೆ: ಭರ್ಜರಿಯಾಗಿ ರೊಟ್ಟಿ/ಭಜ್ಜಿ ಸವಿದ ಭಕ್ತಗಣ
ಕಲಬುರಗಿ : ಲಿಂಗೈಕ್ಯ ಶ್ರೀ ಸಿದ್ದರಾಮ ಶಿವಯೋಗಿಗಳ 75 ನೇ ಪುಣ್ಯಾರಾಧನೆ ನಿಮ್ಮಿತ್ತ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಶಾಖಾಪುರ ಗ್ರಾಮದಲ್ಲಿ ವಿಶಿಷ್ಟ ರೊಟ್ಟಿ ಜಾತ್ರೆ ಅದ್ಧೂರಿಯಾಗಿ ಜರುಗಿತು.. ಅ12 ರಂದು ರಾತ್ರಿ 8 ಗಂಟೆಗೆ ಪೀಠಾಧಿಪತಿ ಶ್ರೀ ಸಿದ್ದರಾನ ಶಿವಾಚಾರ್ಯರ ನೇತೃತ್ವದಲ್ಲಿ ರೊಟ್ಟಿ ಜಾತ್ರೆಗೆ ಚಾಲನೆ ನೀಡಲಾಯಿತು.. 35 ಕ್ವಿಂಟಾಲ್ ಜೋಳದ ರೊಟ್ಟಿ, 15 ಕ್ವಿಂಟಾಲ್ ಸಜ್ಜೆ ರೊಟ್ಟಿ ಹಾಗೂ 20 ಕ್ವೀಂಟಾಲ್‌ಗೂ ಅಧಿಕ ಬಗೆ ಬಗೆಯ ತರಕಾರಿಗಳಿಂದ ಮಾಡಿದ ಭಜ್ಜಿ ಮಾಡಲಾಗಿತ್ತು.. ಜಾತಿ ಬೇಧ ಮರೆತು 10 ಸಾವಿರಕ್ಕೂ ಅಧಿಕ ಭಕ್ತರು ಪಂಕ್ತಿ ಭೋಜನ ಮಾಡಿದರು