ಹುಮ್ನಾಬಾದ್: ಇಂದಿರಾನಗರ ಸರ್ಕಾರಿ ಶಾಲೆ ಶಿಕ್ಷಕರನ್ನು ವರ್ಗಾವಣೆ ಮಾಡದಿರಲು ನಗರದಲ್ಲಿ ಬಿಇಒಗೆ ಇಂದಿರಾನಗರ ನಿವಾಸಿಗಳ ಮನವಿ
Homnabad, Bidar | Nov 19, 2025 ಇಂದಿರಾನಗರ ಸರ್ಕಾರಿ ಶಾಲೆಯಲ್ಲಿ ಮೂರು ಜನ ಮಾತ್ರ ಶಿಕ್ಷಕರಿದ್ದಾರೆ ಆ ಪೈಕಿ ಒಬ್ಬರನ್ನೂ ಅಲ್ಲಿಂದ ವರ್ಗಾವಣೆ ಮಾಡಿರುವ ಮಾಹಿತಿ ಲಭ್ಯವಾಗಿದೆ ಆ ಶಿಕ್ಷಕರು ಅಲ್ಲಿಂದ ವರ್ಗಾವಣೆ ಆದರೆ ವಿದ್ಯಾರ್ಥಿಗಳ ಓದಿಗೆ ತೀವ್ರ ತೊಂದರೆ ಆಗುತ್ತದೆ ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬುಧವಾರ ಸಂಜೆ 4:30ಕ್ಕೆ ಬಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಅವರಿಗೆ ಇಂದಿರಾನಗರ ನಿವಾಸಿಗಳು ಮನವಿ ಪತ್ರವನ್ನು ಸಲ್ಲಿಸಿದರು. ಮನವಿ ಪತ್ರ ಸ್ವೀಕರಿಸಿದ ಬಿಒ ವೆಂಕಟೇಶ್ ಗುಡಾಳ್ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.