ಕಾರವಾರ: ಬಸ್ ಮತ್ತು ಸ್ಕೂಟಿ ನಡುವೆ ಅಪಘಾತ; ಮಹಿಳೆ ಸ್ಥಳದಲ್ಲೇ ಸಾವು ಬಾಂಡಿಶಿಟ್ಟಾದಲ್ಲಿ ಘಟನೆ
ಬಾಂಡಿಶಿಟ್ಟಾ ಬಳಿ ರವಿವಾರ ಸಂಜೆ 6ಕ್ಕೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾರಿಗೆ ಬಸ್ ಮತ್ತು ಸ್ಕೂಟಿ ನಡುವಿನ ಡಿಕ್ಕಿಯಲ್ಲಿ ಸ್ಕೂಟಿ ಹಿಂಬದಿಯಲ್ಲಿದ್ದ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಮೇತ್ರಿವಾಡದ ನಿವಾಸಿ ಸುಶೀಲಾ ಕಮಾಲಕರ ನಾಯ್ಕ (65) ಎಂದು ಗುರುತಿಸಲಾಗಿದೆ. ಸುಶೀಲಾ ನಾಯ್ಕ ಅವರು ಸ್ಕೂಟಿಯಲ್ಲಿ ಶೇಜವಾಡ ಕಡೆಯಿಂದ ಕಾರವಾರ ನಗರದತ್ತ ಬರುತ್ತಿದ್ದರು. ಇದೇ ವೇಳೆ, ಕಾರವಾರದಿಂದ ಕಡವಾಡದ ಕಡೆಗೆ ತೆರಳುತ್ತಿದ್ದ ಸಾರಿಗೆ ಬಸ್, ಸ್ಕೂಟಿಗೆ ಅತಿ ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟಿ ಹಿಂಬದಿಯಲ್ಲಿ ಕುಳಿತಿದ್ದ ಸುಶೀಲಾ ಅವರಿಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.