ಬೆಳಗಾವಿ: ಕಾಂಗ್ರೆಸ್ ಸರ್ಕಾರ ಹಿಂದು ವಿರೋಧಿ ನೀತಿಯನ್ನು ಖಂಡಿಸುತ್ತೇವೆ: ನಗರದಲ್ಲಿ ಬಿಜೆಪಿ ಮುಖಂಡ ಎಂ ಬಿ ಜಿರಲಿ
ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯನ್ನು ವಿಜಯಪುರ, ಬಾಗಲಕೋಟೆ ಜಿಲ್ಲೆಗೆ ನಿರ್ಬಂಧ ವಿಚಾರವಾಗಿ ಇಂದು ಬುಧುವಾರ 3 ಗಂಟೆಗೆ ಮಾತನಾಡಿದ ಬಿಜೆಪಿ ಮುಖಂಡ ಎಂಬಿ ಜಿರಲಿ ಎಲ್ಲಾ ಹಿಂದು ನಾಯಕರು ಸೇರಿ ಚರ್ಚೆ ಮಾಡಿದ್ದೇವೆ ಕನ್ನೆರಿ ಮಠದ ಶ್ರೀಗಳ ಸನ್ನಿಧಿಯಲ್ಲಿ ಸಭೆ ನಡೆದಿದೆ ಕಾಂಗ್ರೆಸ್ ಸರ್ಕಾರ ಹಿಂದು ವಿರೋಧಿ ನೀತಿಯನ್ನು ಖಂಡಿಸುತ್ತೇವೆ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ತಹಶಿಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ನಿರ್ಬಂಧ ಆದೇಶ ವಾಪಸ್ ಪಡೆಯದೇ ಇದ್ರೆ ಬೀದಿಗೆ ಇಳಿದು ಹೋರಾಟ ಶ್ರೀಗಳ ಹಿಂದು ಸಮಾಜದ ಸಂಸ್ಕೃತಿಯನ್ನು ಪ್ರೀತಿಸುವವರು ರೈತರಾಗಿ ಅನೇಕ ಯೋಜನೆ, ಗೋ ರಕ್ಷಣೆ, ಸಾವಯವ ಕೃಷಿ ಮಾಡಿದ್ದಾರೆ ಎಂದರು.