ಇಳಕಲ್: ನಗರದ ಆಶಾದೀಪ ಸಂಸ್ಥೆಯ ಪದಾಧಿಕಾರಿಗಳ ಆಯ್ಕೆ
Ilkal, Bagalkot | Sep 29, 2025 ಇಳಕಲ್ಲ ಆಶಾದೀಪ ಅಂಗವಿಕಲರ ಸರ್ವ ಅಭಿವೃದ್ಧಿ ಸೇವಾ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು. ಗೌರವ ಅಧ್ಯಕ್ಷರಾಗಿ ಗೌರಮ್ಮ ಕಾಶಪ್ಪನವರ, ಅಧ್ಯಕ್ಷ ಚಂದ್ರು ಅಪ್ಪಾಜಿ, ಉಪಾಧ್ಯಕ್ಷೆಯಾಗಿ ಸುಜಾತ ಕೋರಿ, ಪ್ರಧಾನ ಕಾರ್ಯದರ್ಶಿಯಾಗಿ ರಘು ಹುಬ್ಬಳಿ, ಸಹ ಕಾರ್ಯದರ್ಶಿಯಾಗಿ ಅರುಣಕುಮಾರ ಎಸ್.ಕೋಶಾಧಿಕಾರಿಯಾಗಿ ರಹೇಮಾನ ಬೂವಾಜಿ ಆಯ್ಕೆಯಾದರು ಎಂದು ಕಾರ್ಯದರ್ಶಿ ರಘು ಹುಬ್ಬಳಿ ಸಾಯಂಕಾಲ 6 ಗಂಟೆಗೆ ಮಾಧ್ಯಮಕ್ಕೆ ಮಾಹಿತಿಯನ್ನು ನೀಡಿದರು.