ಕಲಬುರಗಿ : ಬೆಳಕಿನ ಹಬ್ಬ ದೀಪಾವಳಿಗೆ ಪಟಾಕಿ ಸಿಡಿಸೋದು ಅಷ್ಟೇ ನಮ್ಮ ಕೆಲಸ ಅಂತಾ ಅಂದುಕೊಂಡರೆ ಅದು ಸುಳ್ಳು.. ದೀಪಾವಳಿ ಹಬ್ಬವನ್ನ ಹೇಗೆ ಸಾಂಪ್ರದಾಯಿಕವಾಗಿ ಆಚರಿಸಬೇಕು ಅನ್ನೊದು ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಿವಿಧ ತಾಂಡಾದ ಯುವತಿಯರು ತೋರಿಸಿಕೊಟ್ಟಿದ್ದಾರೆ.. ಅ22 ರಂದು ಮಧ್ಯಾನ 12 ಗಂಟೆಗೆ ವಾಡಿ ಪಟ್ಟಣ ವ್ಯಾಪ್ತಿಯ ತಾಂಡಾಗಳಲ್ಲಿ ಲಂಬಾಣಿ ಸಮುದಾಯದ ಯುವತಿಯರು ಲಂಗಾ ದಾವಣಿ ಉಡುಪು ಧರಿಸಿ ಸಾಮೂಹಿಕ ನೃತ್ಯ ಮಾಡಿ ಗಮನ ಸೆಳೆದಿದ್ದಾರೆ