ಇಳಕಲ್: ನಗರದ ಸ್ವಚ್ಚತೆಗೆ ಸಹಕರಿಸಿ : ನಗರದಲ್ಲಿ ಸುಧಾರಾಣಿ ಸಂಗಮ್
Ilkal, Bagalkot | Sep 25, 2025 ನಮ್ಮ ಸುತ್ತಮುತ್ತಲೂ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಲು ಸ್ವಚ್ಛತೆ ಅಗತ್ಯ. ಸ್ವಚ್ಚ ನಗರ ನಿರ್ಮಾಣಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ್ ಹೇಳಿದರು. ಬಾಗಲಕೋಟ ಜಿಲ್ಲೆಯ ಇಳಕಲ್ ನಗರಸಭೆ ವತಿಯಿಂದ ಮುರ್ತುಜಾ ಖಾದ್ರಿ ದರ್ಗಾದ ಆವರಣದಲ್ಲಿ ಸೆ.೨೫ ಮಧ್ಯಾಹ್ನ ೧ ಗಂಟೆಗೆ ಗುರುವಾರದಂದು ನಡೆದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮವನ್ನು ಕಸ ಗೂಡಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ನಮ್ಮ ದೇಶದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಹಸಿ ಕಸ, ಒಣ ಕಸ ವಿಂಗಡನ ಮಾಡಿ ಸ್ವಚ್ಛತಾ ವಾಹಿನಿಗೆ ನೀಡುವ ಮೂಲಕ ಸಾರ್ವಜನಿಕರು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು. ನಗರಸಭೆ ಆಯುಕ್ತ ಶ್ರೀನಿವಾಸ ಜಾಧವ ನಗರಸಭೆ ಸದಸ್ಯ ಹುಸೇನಸಾಬ ಬಾಗವಾನ, ಹನಮಂತ ತುಂಬದ, ನಾಮನಿರ್ದೇಶಿ