ಸೂಪಾ: ಚಾಂದೇವಾಡಿ ಹತ್ತಿರ ಪಾಂಡ್ರಿ ನದಿಯಲ್ಲಿ ಈಜಲು ಹೋದ ದಾಂಡೇಲಿಯ ವ್ಯಕ್ತಿ ಮುಳುಗಿ ಸಾವು
ಜೋಯಿಡಾ : ಗೆಳೆಯರ ಜೊತೆ ಈಜಲೆಂದು ತೆರಳಿದ ವ್ಯಕ್ತಿಯೊಬ್ಬ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಜೋಯಿಡಾ ತಾಲೂಕಿನ ಚಾಂದೇವಾಡಿ ಹತ್ತಿರ ಪಾಂಡ್ರಿ ನದಿಯಲ್ಲಿ ನಡೆದಿರುವ ಬಗ್ಗೆ ಇಂದು ಮಂಗಳವಾರ ಮಧ್ಯಾಹ್ನ 3:30 ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಮೃತಪಟ್ಟ ವ್ಯಕ್ತಿ ದಾಂಡೇಲಿಯ ಗಣೇಶನಗರದ ನಿವಾಸಿ ಇರ್ಷಾದ್ ಅಹ್ಮದ್ ಮುಗುಟಸಾಬ್ ಹುಕ್ಕೇರಿ (ವ.37) ಎಂದು ತಿಳಿದುಬಂದಿದೆ. ಎಂಟತ್ತು ಜನರ ತಂಡವೊಂದು ದಾಂಡೇಲಿಯಿಂದ ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಚಾಂದೇವಾಡಿಗೆ ತೆರಳಿದ್ದರು. ಅಲ್ಲಿ ಊಟ ಮಾಡಿದ ಬಳಿಕ ಹತ್ತಿರದಲ್ಲಿದ್ದ ಪಾಂಡ್ರಿ ನದಿಗೆ ಸ್ನಾನಕ್ಕೆಂದು ತೆರಳಿದ್ದರು ಎನ್ನಲಾಗಿದೆ. ಇರ್ಷಾದ್ ಅವರು ನದಿಗಿಳಿದಿದ್ದಾರೆ. ಆದರೆ ಈಜು ಬಾರದೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.