ಪಟ್ಟಣದಲ್ಲಿ ಪ್ರವಾಹ ಸಂತ್ರಸ್ತರಿಗೆ ಕಿಟ್ ವಿತರಣೆ ಮಾಡಿದ ಮುಖಂಡರು
ಮಹಾರಾಷ್ಟ್ರದಲ್ಲಿ ಅಧಿಕ ಮಳೆ ಬಂದ ಹಿನ್ನಲೆಯಲ್ಲಿ ಭೀಮಾನದಿ ಪಾತ್ರದಲ್ಲಿ ಪ್ರವಾಹ ಉಂಟಾಗಿದೆ. ಪ್ರವಾಹ ಸಂತ್ರಸ್ತರ ಸಮಸ್ಯೆ ಆಲಿಸುವ ಮೂಲಕ ಅವರಿದ್ದ ಸ್ಥಳಕ್ಕೆ ಹೋಗಿ ಆಹಾರದ ಕಿಟ್ ಅನ್ನು ಶ್ರೀಶೈಲ್ ಗೌಡ ಬಿರಾದಾರ ಎಂಬಾತರು ವಿತರಣೆ ಮಾಡಿದರು. ಆಲಮೇಲ ತಾಲೂಕಿನ ದೇವಣಗಾಂವ, ಶಂಭೇವಾಡ್, ಕಡ್ಲೇವಾಡ್, ಕುಮಸಗಿ ಸೇರಿದಂತೆ ಹಲವಡೆ ಪ್ರವಾಹ ನಿರಾಶ್ರಿತರು ಇರುವ ಸ್ಥಳಕ್ಕೆ ಭೇಟಿ ನೀಡಿ ಆಹಾರದ ಕಿಟ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಹಲವರಿದ್ದರು.