ಬಳ್ಳಾರಿಯಲ್ಲಿಯೇ ತಕ್ಷಣ ಮೆಕ್ಕೆಜೋಳ ಖರೀದಿ ಕೇಂದ್ರ ಎಂದು ಆರಂಭಿಸಬೇಕು ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಅಧ್ಯಕ್ಷಮಾಧವ ರೆಡ್ಡಿ, ಒತ್ತಾಯಿಸಿದ್ದಾರೆ. ಮಂಗಳವಾರ ಮದ್ಯಾಹ್ನ 12ಗಂಟೆಗೆಮಾತನಾಡಿ, (ಕೆಎಂಎಫ್) ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ದರದಲ್ಲಿ ರೈತರಿಂದ ಮೆಕ್ಕೆ ಜೋಳವನ್ನು ಖರೀದಿಸುತ್ತಿದೆಯಾದರೂ, ರೈತರಿಗೆ ಇದರ ಸಂಪೂರ್ಣ ಲಾಭ ಸಿಗದಂಥ ಪರಿಸ್ಥಿತಿ ಎದುರಾಗಿದೆ. ಸಾಗಣೆ ವೆಚ್ಚವೇ ದುಬಾರಿಯಾಗುವ ಆತಂಕ ಎದುರಾಗಿದೆ. ಮೆಕ್ಕೆಜೋಳ ಮಾರಾಟ ಮಾಡಲು ಕೆಎಂಎಫ್‌ಗೆ ನೋಂದಣಿ ಮಾಡಿಕೊಂಡಿರುವ ಬಳ್ಳಾರಿ, ವಿಜಯನಗರ, ಕೊಪ್ಪಳ ಭಾಗದ ರೈತರು, ಉತ್ಪನ್ನವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಧಾರವಾಡಕ್ಕೆ ಕೊಂಡೊಯ್ಯಬೇಕಾಗಿ ಬಂದಿದೆ.