ಕಲಬುರಗಿ : ಕಲಬುರಗಿ ನಗರದ ಸರಾಫ್ ಬಜಾರ್ನಲ್ಲಿ ನಡೆದುಕೊಂಡು ಹೋಗ್ತಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್ನಿಂದ ಕ್ಷಣಾರ್ಧದಲ್ಲಿ ₹2.50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನ ಕಳ್ಳತನವಾದ ಘಟನೆ ನಡೆದಿದ್ದು, ಡಿಸೆಂಬರ್ 27 ರಂದು ರಾತ್ರಿ 9 ಗಂಟೆಗೆ ಮಾಹಿತಿ ಲಭ್ಯವಾಗಿದೆ. ನಿರ್ಮಲಾ ಕಮಲಾಕರ್ ಎಂಬುವರು ಸರಾಫ್ ಬಜಾರ್ನಲ್ಲಿ ನಡೆದುಕೊಂಡು ಹೋಗ್ತಿರೋವಾಗ ಅವರ ವ್ಯಾನಿಟಿ ಬ್ಯಾಗ್ನಿಂದ 20 ಗ್ರಾಂ ಚಿನ್ನದ ಪ್ಯಾಕೇಟ್ನ್ನ ಖಧೀಮರು ಕಳ್ಳತನ ಮಾಡಿದ್ದಾರೆ. ಇನ್ನೂ ಈ ಬಗ್ಗೆ ಚಿನ್ನ ಕಳೆದುಕೊಂಡ ಮಹಿಳೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.