ಚಾಮರಾಜನಗರ: ಯಾನಗಳ್ಳಿ ಗ್ರಾಮದಲ್ಲಿ ದೇವಾಲಯ ಬೀಗ ಒಡೆದು ಹುಂಡಿಗೆ ಕನ್ನ
ದೇವಾಲಯ ಬೀಗ ಒಡೆದು ಹುಂಡಿ ಹಣ ಕದ್ದೊಯ್ದ ಘಟನೆ ಚಾಮರಾಜನಗರ ತಾಲೂಕಿನ ಯಾನಗಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಯಾನಗಳ್ಳಿ ಗ್ರಾಮದ ಚಿಕ್ಕಮ್ಮ ಚಿಕ್ಕದೇವಮ್ಮ ದೇವಾಲಯ ಬೀಗ ಒಡೆದು, ಹುಂಡಿಯನ್ನು ಪಕ್ಕದ ಜಮೀನಿಗೆ ಕೊಂಡೊಯ್ದು ನಗದನ್ನು ಕದ್ದು ಹುಂಡಿ, ಚಿಲ್ಲರೆ ಕಾಸನ್ನು ಜಮೀನಿನಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ವಿಚಾರ ತಿಳಿದು ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಮುಂದಿನ ತನಿಖೆ ಕೈಗೊಂಡಿದ್ದಾರೆ.