ದಾಂಡೇಲಿ: ಬೇಡರಶಿರಗೂರಿನಲ್ಲಿ ಆನೆ ಹಾವಳಿ, ಬೆಳೆ ನಾಶ
ದಾಂಡೇಲಿ : ಕಳೆದ ಒಂದು ವಾರದಿಂದ ನಿರಂತರವಾಗಿ ಆನೆಗಳಗಳು ಸ್ಥಳೀಯ ರೈತರ ಹೊಲಗದ್ದೆಗಳಿಗೆ, ದಾಳಿ ಮಾಡುತ್ತಿರುವುದರಿಂದ ಅಪಾರ ಪ್ರಮಾಣದಲ್ಲಿ ಭತ್ತದ ಬೆಳೆ ಹಾಗೂ ಮೆಕ್ಕೆ ಜೋಳದ ಬೆಳೆ ನಾಶವಾಗಿರುವ ಘಟನೆ ತಾಲೂಕಿನ ಬೇಡರಶಿರಗೂರಿನಲ್ಲಿ ನಡೆದಿದೆ. ಇಂದು ಮಂಗಳವಾರವು ನಸುಕಿನ ವೇಳೆ 5 ಗಂಟೆ ಸುಮಾರಿಗೆ ಒಂಟಿ ಸಲಗವೊಂದು ಹೊಲ ಗದ್ದೆಗಳಿಗೆ ನುಗ್ಗಿದ್ದು, ಸ್ಥಳೀಯರು ಆನೆ ಓಡಿಸಲು ಹರಸಾಹಸ ಪಟ್ಟಿದ್ದಾರೆ. ತಡರಾತ್ರಿ ಇಲ್ಲವೇ ನಸುಕಿನ ವೇಳೆಯಲ್ಲಿ ಒಂಟಿ ಸಲಗ ಗದ್ದೆಗಳಿಗೆ ದಾಳಿ ಮಾಡುತ್ತಿದ್ದು, ಬೆಳೆ ನಾಶವಾಗುತ್ತಿದೆ. ಇದರಿಂದ ಸ್ಥಳೀಯ ರೈತರಿಗೆ ಸಂಕಷ್ಟ ಎದುರಾಗಿದೆ.