ದೊಡ್ಡಬಳ್ಳಾಪುರ : ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕಸವನಹಳ್ಳಿ ಹಾಗೂ ಬಿಸುವನಹಳ್ಳಿ ಗ್ರಾಮಗಳಿಗೆ ಪ್ರತ್ಯೇಕ ವಾರ್ಡ್ ನೀಡಬೇಕು ಇಲ್ಲದ ಪಕ್ಷದಲ್ಲಿ ಮುಂಬರುವ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡದೆ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಸ್ಥಳೀಯ ಗ್ರಾಮಸ್ಥರು ಎಚ್ಚರಿಕೆ ನೀಡಿದರು. ಕಳೆದ ಹಲವಾರು ವರ್ಷಗಳಿಂದ ನಮ್ಮ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳು ನೆನೆಗುದ್ದಿಗೆ ಬಿದ್ದಿವೆ, ಹೆಚ್ಚು ಜನಸಂಖ್ಯೆ, ಹೆಚ್ಚಾದ ವಿಸ್ತೀರ್ಣ ಹೊಂದಿರುವ ನಮ್ಮ ಗ್ರಾಮಗಳಿಗೆ ಪ್ರತ್ಯೇಕ ವಾರ್ಡ್ ನೀಡದೆ ಮೋಸ ಮಾಡಲಾಗಿದೆ. ಪ್ರಶ್ನೆ ಮಾಡದ ಪ್ರತಿನಿಧಿಗಳಿಲ್ಲದೆ ಪಟ್ಟಣ ಪಂಚಾಯತಿ ಅಧಿಕಾರಿಗಳೇ ಸರ್ವಧಿಕಾರಿಗಳಂತೆ ವರ್ತಿಸು