ಚಿತ್ರದುರ್ಗ: ನಗರದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ನ ವತಿಯಿಂದ ಪಕೋಡ ಮಾರುವ ಮೂಲಕ ರಾಷ್ಟ್ರೀಯ ನಿರುದ್ಯೋಗ ದಿನಾಚರಣೆ
ಚಿತ್ರದುರ್ಗದಲ್ಲಿಂದು ಪಕೋಡ ಮಾರುವ ಮೂಲಕ ಜಿಲ್ಲಾ ಯುವ ಕಾಂಗ್ರೆಸ್ ನ ವತಿಯಿಂದ ರಾಷ್ಟ್ರೀಯ ನಿರುದ್ಯೋಗ ದಿನಾಚರಣೆ ಮಾಡಲಾಯಿತು. ಇನ್ನೂ ಬುದವಾರ ಮಧ್ಯಾಹ್ನ 12 ಗಂಟೆಗೆ ಓಬವ್ವ ವೃತ್ತದ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಬಾಗ ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಹಿನ್ನೆಲೆ “ರಾಷ್ಟ್ರೀಯ ನಿರುದ್ಯೋಗ ದಿನವಾಗಿ“ ನೌಕರಿ ಚೋರಿ ಗದ್ದಿ ಚೋಡು" ಎನ್ನುವ ಕಾರ್ಯಕ್ರಮ ಪಕೋಡ ಮಾರುವ ಮೂಲಕ ನಿರುದ್ಯೋಗ ದಿನಾಚರಣೆ ಮಾಡಲಾಯಿತು.