ಶಿರಸಿ: ಮೊಹರಂ ಹಿನ್ನೆಲೆ, ಬನವಾಸಿಯಲ್ಲಿ ಪೊಲೀಸರಿಂದ ರೂಟ್ ಮಾರ್ಚ್
ಶಿರಸಿ : ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯ ಬನವಾಸಿ ಹಾಗೂ ದಾಸನಕೊಪ್ಪ ಗ್ರಾಮದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಬನವಾಸಿ ಪೊಲೀಸರಿಂದ ರೂಟ್ ಮಾರ್ಚ್ ಮಾಡಲಾಯಿತು. ಬನವಾಸಿಯ ಪಂಪ ವೃತ್ತದಿಂದ ಪೊಲೀಸ್ ಠಾಣೆಯವರೆಗೆ ಶಿರಸಿ ಸಿಪಿಐ ಶಶಿಕಾಂತ ವರ್ಮಾ ಮುಂದಾಳತ್ವದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ರೂಟ್ ಮಾರ್ಚ್ ಮಾಡಿದ್ದು, ಸಿದ್ದಾಪುರದ ಪಿಐ ಜೆ.ಬಿ. ಸೀತಾರಾಮ, ಬನವಾಸಿ ಪಿಎಸ್ಐಗಳಾದ ಮಾಂತೇಶ್ ಕುಂಬಾರ್, ಸುನಿಲ್ ಕುಮಾರ್ ಹಾಗೂ ಬನವಾಸಿ ಠಾಣಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.