ಇಂಡಿ: ಮಿರಗಿ ಗ್ರಾಮದಲ್ಲಿ ಪ್ರವಾಹದ ನೀರಿನಲ್ಲಿ ಹರಿದು ಬರುತ್ತಿರುವ ಹಾವುಗಳು, ಆತಂಕದಲ್ಲಿ ಜನತೆ
ಮಹಾಮಳೆಗೆ ಭೀಮಾತೀರ ತತ್ತರಿಸಿ ಹೋಗಿದೆ. ಕಳೆದ 15 ದಿನಗಳಿಂದ ನಿರಂತರ ಮಳೆಯ ಪರಿಣಾಮ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಗ್ರಾಮ ತತ್ತರಿಸಿ ಹೋಗಿದೆ. ಇನ್ನೂ ಭೀಮಾನದಿ ಪಾತ್ರದ ಮೊದಲ ಗ್ರಾಮ ಮಿರಗಿ ಇದೆ. ಪ್ರವಾಹದಲ್ಲೇ ದೇವಸ್ಥಾನದ ಜಾತ್ರೆ ಆಚರಣೆ ಮಾಡಲಾಗಿದೆ. ಕ್ಷಣಕ್ಷಣಕ್ಕೂ ಮಳೆ ನೀರು ಅಧಿಕವಾಗುತ್ತಲೇ ಇದೆ. ಆತಂಕದಲ್ಲಿ ಭೀಮಾನದಿ ಪಾತ್ರದ ಜನರಿದ್ದಾರೆ. ಈಗಾಗಲೇ ಮನೆಗಳನ್ನ ಬಿಟ್ಟು ಕಾಳಜಿ ಕೇಂದ್ರಗಳಿಗೆ ಕೆಲವರು ಶಿಫ್ಟ್ ಆಗಿದ್ದಾರೆ