ರಾಯಚೂರು ತಾಲೂ ಕಿನ ಅನ್ವರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉಳಿಸಲು ವಿದ್ಯಾರ್ಥಿಗಳು ಮತ್ತು ಪೋಷಕರ ಆಗ್ರಹದ ಪ್ರತಿಭಟನೆ ಮಾಡಿದರು. ಅನ್ವರಿ ಗ್ರಾಮದ ರೈತರು ಮತ್ತು ಕಾರ್ಮಿಕ ಕುಟುಂಬಗಳ ಮಕ್ಕಳು ಶಿಕ್ಷಣಕ್ಕೆ ಈ ಸರ್ಕಾರಿ ಶಾಲೆಯನ್ನೇ ಅವಲಂಬಿಸಿದ್ದಾರೆ. ಶಾಲೆಯನ್ನು ಮುಚ್ಚಿ, 3 ಕಿ.ಮೀ. ದೂರದಲ್ಲಿರುವ ಮಂಜರ್ಲಾ ಗ್ರಾಮಕ್ಕೆ ಮಕ್ಕಳನ್ನು ಕಳುಹಿಸುವುದು ಅಸಾಧ್ಯ. 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರುವ ಈ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಆಗ್ರಹಿಸಿದರು.