ಚನ್ನಗಿರಿ: ಪಟ್ಟಣದಲ್ಲಿ ನಾಳೆ ವಿರಾಟ್ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ: ಪೊಲೀಸ್ ಬಿಗಿ ಬಂದೋಸ್ತ್, ಪಥ ಸಂಚಲನ
ಪಟ್ಟಣದಲ್ಲಿ ನಾಳೆ ವಿರಾಟ್ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ: ಪೊಲೀಸ್ ಬಿಗಿ ಬಂದೋಸ್ತ್, ಪಥ ಸಂಚಲನ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ನಾಳೆ ಸೆ.24ರಂದು ವಿರಾಟ್ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದ್ದು, ಮಂಗಳವಾರ ಸಂಜೆ 6 ಗಂಟೆಗೆ ಪೊಲೀಸ್ ಪಥ ಸಂಚಲನ ನಡೆಯಿತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಪೊಲೀಸ್ ಪಥ ಸಂಚಲನ ನಡೆಯಿತು. ಈ ವೇಳೆ ನಾಳೆ ಪಟ್ಟಣದಲ್ಲಿ ಯಾವುದೇ ಅಹಿಕರ ಘಟನೆಗಳು ನಡೆಯದಂತೆ ಗಮನಹರಿಸಬೇಕು ಎಂದು ಪೊಲೀಸರಿಗೆ ಎಸ್ಪಿ ಉಮಾ ಸೂಚನೆ ನೀಡಿದರು.