ಧಾರವಾಡ ಸೃಜನಾ ರಂಗಮಂದಿರದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಅಭಿನಯ ಭಾರತಿ ಧಾರವಾಡ ವತಿಯಿಂದ ವಿಜ್ಞಾನ ನಾಟಕೋತ್ಸವ 2025 ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಶನಿವಾರ ಸಂಜೆ 5 ಗಂಟೆಗೆ ಕಲಾ ಸುರುಚಿ ಅರ್ಪಿಸುವ ರಾಮನ್ ಹಾಗೂ ಐನ್ ಸ್ಟೈನ್ ನಾಟಕಗಳು ಪ್ರದರ್ಶನಗೊಂಡವು.