ಭಾಲ್ಕಿ: ಅಂಬೇಸಂಗಾವಿ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಿ; ಪಟ್ಟಣದಲ್ಲಿ ವಿದ್ಯಾರ್ಥಿಗಳ ಒತ್ತಾಯ
Bhalki, Bidar | Nov 11, 2025 ಅಂಬೆಸಂಗಾವಿಗೆ ಬಸ್ ಓಡಿಸಿ ವಿದ್ಯಾರ್ಥಿಗಳ ಆಗ್ರಹ ಭಾಲ್ಕಿ : ತಾಲೂಕಿನ ಅಂಬೆಸಂಗಾವಿ ಗ್ರಾಮದಿಂದ ಭಾಲ್ಕಿಯ ಶಾಲಾ, ಕಾಲೇಜಗಳಿಗೆ ಹೋಗಲು ಪ್ರತಿನಿತ್ಯ ಸಮಸ್ಯೆ ಆಗುತ್ತಿದ್ದು ಹೆಚ್ಚುವರಿ ಬಸ್ ಓಡಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಇಂದು ಬೆಳಗ್ಗೆ ನಡೆದುಕೊಂಡು ಬಸ್ ಡಿಪೋಗೆ ಬಂದ ವಿದ್ಯಾರ್ಥಿಗಳು ಘಟಕ ವ್ಯವಸ್ಥಾಪಕರ ಜೊತೆಗೆ ಮಾತನಾಡಿ ನಮ್ಮ ಗ್ರಾಮದಿಂದ ಶಾಲೆ, ಕಾಲೇಜುಗಳಿಗೆ ಹೋಗಲು ಪ್ರತಿ ನಿತ್ಯ ತೊಂದರೆ ಅನುಭವಿಸುತಿದೆವೆ, ಸರಿಯಾದ ಸಮಯಕ್ಕೆ ಬಸ್ ಸಿಗದ ಕಾರಣ ನಮ್ಮ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ. ಸರಿಯಾಗಿ ಕ್ಲಾಸ್ , ಪರೀಕ್ಷೆ ಅಟೆಂಡ್ ಆಗಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಸಮಸ್ಯೆ ಹೇಳಿಕೊಂಡರು.