ಸಿಂಧನೂರು: ಕೆಲಸ ಮುಗಿಸಿ ಮನೆಗೆ ಬರಬೇಕಾದವ ಶವವಾಗಿದ್ದಾನೆ
ರಾಯಚೂರು ಜಿಲ್ಲೆಯ ಸಿಂಧನೂರಿನ ಇಂದಿರಾನಗರದಲ್ಲಿರುವ ಒಂದು ಖಾಲಿ ಲೇಔಟ್ ನಲ್ಲಿ ಶವ ಸಿಕ್ಕಿದೆ. ಕೈ ಕಾಲು ಕಟ್ಟಿ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಲಾಗಿದೆ. ಆರ್.ಎಚ್. ಕ್ಯಾಂಪ್ ನಂಬರ್ -2 ರ 33 ವರ್ಷದ ಪ್ರಭೀರ್ ಸರ್ದಾರ್ ಕೊಲೆಗೀಡಾದ ವ್ಯಕ್ತಿ. ಸೋಮವಾರ 3 ಗಂಟೆಗೆ ಮಾತನಾಡುತ್ತಾ ಸಿಂಧನೂರು ನಗರಸಭೆ ಕಚೇರಿ ಹತ್ತಿರ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ ಪ್ರಭೀರ್ ಸರ್ದಾರ್ ವ್ಯಾಪಾರ ಮಾಡುತ್ತಿದ್ದ. ಪ್ರತಿನಿತ್ಯ ಕ್ಯಾಂಪಿನಲ್ಲಿನ ಮನೆಯಿಂದ ಅಂಗಡಿಗೆ ಬಂದು ಹೋಗುತ್ತಿದ್ದ. ಆದ್ರೆ ಏಕಾಏಕಿ ಕಳೆದ ಆರು ದಿನಗಳಿಂದ ನಾಪತ್ತೆಯಾಗಿದ್ದ. ಅಂಗಡಿಯಿಂದ ಮನೆಗೆ ವಾಪಸ್ ಬಂದಿರಲಿಲ್ಲ. ತಡ ರಾತ್ರಿಯಾದರೂ ಮನೆ ಬಾರದೇ ಇದ್ದಾಗ ಕುಟುಂಬಸ್ಥರು ಮನೆಗೆ ಬರುವ ಎಲ್ಲಾ ದಾರಿ ಮತ್ತು ಸಿಂಧನೂರು ನಗರದಲ್ಲಿ ಹುಡುಕಾಡಿದರೂ ಪತ್ತೆಯಾಗಿರಲಿ