ಮಳವಳ್ಳಿ: ತಾಲ್ಲೂಕಿನ ಬ್ಯಾಡರಹಳ್ಳಿ ಬಳಿ ಭಾರಿ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಹಾವು ರಕ್ಷಿಸಿ ಕಾಡಿಗೆ ಬಿಟ್ಟ ಉರಗ ತಜ್ಞರು
ಮಳವಳ್ಳಿ : ಭಾರಿ ಗಾತ್ರದ ಹೆಬ್ಬಾವು ಒಂದು ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಬ್ಯಾಡರಹಳ್ಳಿ ಗ್ರಾಮದ ಬಳಿ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಈ ಗ್ರಾಮದ ಹೊರವಲಯದ ಬಾದಾಮಿ ಫಾರ್ಮನಲ್ಲಿನ ಪೊದೆ ಯಲ್ಲಿ ಗುರುವಾರ ಸಾಯಂಕಾಲ 4 ಗಂಟೆ ಸಮಯದಲ್ಲಿ ಸುಮಾರು 7 ಅಡಿ ಉದ್ದದ ಹೆಬ್ಬಾವು ಕಂಡ ಫಾರಂ ನವರು ಅರಣ್ಯ ಇಲಾಖೆ ಯವರಿಗೆ ಸುದ್ದಿ ಮುಟ್ಟಿಸಿದ್ದು ಮೇರೆಗೆ ಅರಣ್ಯ ಇಲಾಖೆಯವರ ಕರೆ ಮೇರೆಗೆ ಸ್ಥಳಕ್ಕೆ ಧಾವಿಸಿದ ಹಲಗೂರಿನ ಉರಗ ತಜ್ಞರಾದ ಜಗದೀಶ್ ಹಾಗೂ ಕೃಷ್ಣ ಅವರು ಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.