ಹುಮ್ನಾಬಾದ್: ನಗರದಲ್ಲಿ ಆಲಮರಾ ಬೀಗ ಮುರಿದು ₹15ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ -ನಗದು ಕಳ್ಳತನ ಸ್ಥಳಕ್ಕೆ ಪೊಲೀಸರ ಭೇಟಿ
Homnabad, Bidar | Oct 21, 2025 ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಮನೆ ಹಾಗೂ ಅಲ್ಮಾರ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಸೇರಿ ಒಟ್ಟು ₹15 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತು ಕಳ್ಳತನ ಆಗಿರುವ ಪ್ರಕರಣ ಮಂಗಳವಾರ ರಾತ್ರಿ 8:30ಕ್ಕೆ ಗಮನಕ್ಕೆ ಬಂದಿದೆ. ಕಳ್ಳತನ ಆಗಿರುವ ಸ್ವತ್ತು ತಾಲೂಕಿನ ದುಬಲಗುಂಡಿ ಗ್ರಾಮದ ನಿವಾಸಿ ಮಲ್ಲಿಕಾರ್ಜುನ ಸೋನಕೇರಿ ಅವರಿಗೆ ಸೇರಿದೆಂದು ತಿಳಿದುಬಂದಿದೆ. ಪ್ರಕರಣ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದಾಗ ಮನೆಯವರು ಮಾಹಿತಿ ನೀಡಿದರು.