ಚಿಂತಾಮಣಿ: ಚಿಂತಾಮಣಿ ನಗರದ ಹೊರವಲಯದ ಜೆ.ಕೆ.ಭವನದಲ್ಲಿ ಮಾಜಿ ಶಾಸಕ ಜೆ.ಕೆ.ಕೃಷ್ಣರೆಡ್ಡಿಯಿಂದ ಸುದ್ದಿಗೊಷ್ಠಿ
ನಗರದ ಹೊರವಲಯದ ಜೆ ಕೆ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಳೆದ ಹಲವು ದಿನಗಳಿಂದ ಸರ್ಕಾರಿ ಯಾವುದೇ ಕಾರ್ಯಕ್ರಮಗಳಿಗೆ ತೆರಳಿ ಮಾತನಾಡುತ್ತಿರುವ ಸಚಿವ ಡಾ.ಎಂ.ಸಿ.ಸುಧಾಕರ್ ನನ್ನ ೧೦ ವರ್ಷದ ಅವಧಿಯಲ್ಲಿ ಕ್ಷೇತ್ರದ ಸರ್ವನಾಶವಾಗಿದೆಯೆಂದು ಹೇಳುತ್ತಿದ್ದಾರೆ. ಇವರಿಗೆ ೨೦೧೩ ರಿಂದ ೨೦೨೩ರ ವರೆಗೆ ೧೦ ವರ್ಷ ಅಧಿಕಾರ ಕಳೆದುಕೊಂಡು ೧೦ ವರ್ಷಗಳ ಕಾಲ ನನ್ನನ್ನು ಅಧಿಕಾರದಿಂದ ದೂರವಿಟ್ಟರೆಂಬ ನೋವಿದೆ ಒಂದು ವೇಳೇ ಇದೇ ೧೦ವರ್ಷ ಅಧಿಕಾರದಲ್ಲಿದ್ದರೆ ೧೦೦ ಎಕರೆಗೂ ಹೆಚ್ಚು ಸರ್ಕಾರಿ ಜಮೀನುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದಾಗಿತ್ತೆಂಬ ಹತಾಶೆ ಅವರನ್ನು ಕಾಡುತ್ತಿದ್ದು ಇದರಿಂದಾಗಿ ಅವರು ಯಾವುದೇ ಕಾರ್ಯಕ್ರಮದಲ್ಲೂ ಇಂತಹ ನುಡಿಗಳನ್ನು ನುಡಿಯುತ್ತಿದ್ದಾರೆಂದರು ವ್ಯಂಗವಾಡಿ