ಬೆಂಗಳೂರು ದಕ್ಷಿಣ: ಸರ್ಕಾರ ಹೊಸಕೆರೆಹಳ್ಳಿ ಮೇಲ್ಸುತುವೆಗೆ ಹಣ ಬಿಡುಗಡೆ ಮಾಡಿಲ್ಲ: ನಗರದಲ್ಲಿ ಆರ್.ಅಶೋಕ್
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಹೊಸಕೆರೆಹಳ್ಳಿ ಬಳಿ ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ಹೊಸಕೆರೆಹಳ್ಳಿ ಮೇಲ್ಸುತುವೆ ಬಹಳ ದಿನಗಳಿಂದಲೂ ಪೆಂಡಿಂಗ್ ಆಗಿ ಉಳಿದಿತ್ತು. ನಮ್ಮ ಸರ್ಕಾರ ಇದ್ದಾಗ ಇದನ್ನು ಪ್ರಾರಂಭ ಮಾಡಿ, ಅರ್ಧ ಕೆಲಸ ಮುಗಿದು ಹೋಗಿತ್ತು. ಈ ಸರ್ಕಾರ ಬಂದ ಮೇಲೆ ಅದಕ್ಕೆ ಹಣ ಬಿಡುಗಡೆ ಮಾಡಿರಲಿಲ್ಲ. ಕಂಟ್ರಾಕ್ಟರ್ ಕೇಳಿದ್ರೆ ದುಡ್ಡು ಬಿಡುಗಡೆ ಮಾಡಿದ್ರೆ ಕೆಲಸ ಮಾಡ್ತೀವಿ ಅಂತಿದ್ರು. ಇವಾಗ ರಾಷ್ಟ್ರೀಯ ಸ್ವಯಂ ಸೇವಾ ಸಂಘದವರ ಕಾರ್ಯಕ್ರಮ ಪಿಇಎಸ್ ನಲ್ಲಿದೆ,ಅದಕ್ಕಾಗಿ ಇವತ್ತು ಉದ್ಘಾಟನೆ ಮಾಡುವಂತೆ ಒತ್ತಡ ಹಾಕಿದ್ವಿ. ಆದರೆ ಪೂರ್ಣ ಆಗಿಲ್ಲ, ಮುಗಿಯೋದು ಇನ್ನೂ ಹತ್ತು ಹನ್ನೆರಡು ದಿನಗಳು ಆಗಬಹುದು ಎಂದರು.