ಸೂಪಾ: ತಹಶೀಲ್ದಾರ್ ಕಾರ್ಯಾಲಯದಲ್ಲಿ ಕನಕದಾಸ ಜಯಂತಿ ಆಚರಣೆ
ಜೋಯಿಡಾ : ತಾಲ್ಲೂಕು ಕೇಂದ್ರದಲ್ಲಿರುವ ತಹಶೀಲ್ದಾರ್ ಕಾರ್ಯಾಲಯದಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಇಂದು ಶನಿವಾರ ಬೆಳಿಗ್ಗೆ 10.30 ಗಂಟೆ ಸುಮಾರಿಗೆ ಆಚರಿಸಲಾಯಿತು. ತಹಶೀಲ್ದಾರ್ ಮಂಜುನಾಥ್ ಮುನ್ನೋಳ್ಳಿಯವರು ಶ್ರೀ.ಕನಕದಾಸರ ಭಾವಚಿತ್ರಕ್ಕೆ ಆರತಿ ಬೆಳಗಿ ಪೂಜೆಯನ್ನು ಸಲ್ಲಿಸಿ ಮಾತನಾಡುತ್ತಾ, ಕನಕದಾಸರು ಕೇವಲ ಸಂತರಾಗಿ ಮಾತ್ರವಲ್ಲ, ಒಬ್ಬ ಉತ್ಕಟ ಸಮಾಜ ಸುಧಾರಕರೂ ಆಗಿದ್ದರು. ಕನಕದಾಸರು ಸಮಾಜದಲ್ಲಿ ಸಮತೋಲನವನ್ನು ತರುವುದಕ್ಕಾಗಿ ಪ್ರತಿಪಾದನೆಯನ್ನು ಮಾಡಿದವರು. ಅಸಮಾನತೆಯನ್ನು ಹೋಗಲಾಡಿಸಲು ತಮ್ಮ ವಚನಗಳ ಮೂಲಕ ಜನ ಜಾಗೃತಿಯನ್ನು ಮೂಡಿಸಿದ ಕನಕದಾಸರ ತತ್ವಾದರ್ಶಗಳು ಸದಾ ಪ್ರೇರಣಾದಾಯಿಯಾಗಿದೆ ಎಂದರು.